ಸಖೀಗೀತದ ಕಾವ್ಯ ಸೌಂದರ್ಯ ಒಳಗಣ್ಣಿನ ತುತ್ತು. ಡಾ.ಶ್ಯಾಮಸುಂದರ ಬಿದರಕುಂದಿ.

The poetic beauty of the sunglasses is an underground tinge. Dr. Shamasundara Bidarakundi.

ಬೆಳಗಾವಿ – ( news belgaum)ಬಾಹ್ಯ ಸೌಂದರ್ಯ ಕಣ್ಣಿನ ತುತ್ತು. ಸಖೀಗೀತದ ಕಾವ್ಯ ಸೌಂದರ್ಯ ಒಳಗಣ್ಣಿನ ತುತ್ತು. ಕಾರಣ ಗಮಕ ಶೈಲಿಯ ಪ್ರಾಸಬದ್ಧ ವೈಶಿಷ್ಟ್ಯಪೂರ್ಣ ಅಕ್ಕರ ಛಂದಸ್ಸಿನ ಸಖೀಗೀತವನ್ನು (ನಲವತ್ತು ಭಾಗ, ಪ್ರತಿ ಭಾಗದಲ್ಲೂ ಆರು ನುಡಿಗಳಿರುವ)ಓದಲು ಶಬ್ದಶಃ ಅರ್ಥ ಗ್ರಹಿಕೆ ತರವಲ್ಲ. ಆ ಕವಿತೆಯ ಸೌಂದರ್ಯವನ್ನು ಅರಿಯಲು ಒಳಗಣ್ಣು ತೆರೆದು ಓದಬೇಕು ಎಂದು ದ.ರಾ. ಬೇಂದ್ರೆಯವರ ಕೃತಿಗಳ ಆಳ ಅಧ್ಯಯನ ನಡೆಸಿದ ಅನುಭವಿ ಖ್ಯಾತ ವಿಮರ್ಶಕ ಡಾ. ಶ್ಯಾಮಸುಂದರ ಬಿದರಕುಂದಿ ಹೇಳಿದರು.
ಬೆಳಗಾವಿ ಸಾಂಸ್ಕøತಿಕ ವೇದಿಕೆ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ತಿಂಗಳ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ವಿಶೇಷ ಉಪನ್ಯಾಸಕರಾಗಿ ಆಗಮಿಸಿ, ವರಕವಿ ಬೇಂದ್ರೆಯವರ ಸಖೀಗೀತದ ಕುರಿತು ಉಪನ್ಯಾಸ ಮಾಡುತ್ತಿದ್ದರು. ನವೋದಯ ಕಾಲದ ಪ್ರಜ್ಞಾವಂತ ಸಂವೇದನಶೀಲ ಕವಿ ಬೇಂದ್ರೆ ಆಧುನಿಕ ಅಂಶಗಳನ್ನು ಮೈಗೂಡಿಸಿಕೊಂಡವರು. ಕಾವ್ಯವನ್ನೇ ಉದ್ಯೋಗ ಮಾಡಿಕೊಂಡವರು. ಅವರ ಕವನಗಳಿಗೆ ಸ್ಫೂರ್ತಿಯೇ ಮೂಲ ಬೇರು. ಅವರಿಗೆ ಸ್ಫೂರ್ತಿಯೊಂದು ಮಿಂಚು, ಸ್ವಾನುಭವ, ಜೀವನ ದೃಷ್ಟಿ ಮತ್ತು ವೈಯಕ್ತಿಕ ಅಗತ್ಯ-ಅನಿವಾರ್ಯ, ಅವರ ಹದಿನೇಳು ವರ್ಷದ ದಾಂಪತ್ಯ ಜೀವನದ ಕತೆ ಒಂದು ಗೂಡಿ ಬಂದಿದ್ದೇ ಬೇಂದ್ರೆ ಅವರ “ಸಖೀಗೀತ”. ದ.ರಾ. ಬೇಂದ್ರೆ ಹಾಗು ಲಕ್ಷ್ಮೀಬಾಯಿ ಮದುವೆಯ ಪ್ರಸಂಗದಿಂದಲೇ ಆರಂಭವಾಗುವ ಈ ದಾಂಪತ್ಯಗೀತ ಗಂಡ-ಹೆಂಡಿರ ಕತೆ, ಒಂದು ಕುಟುಂಬದ ಕತೆ, ಬದುಕಿನ ಸಾಂಸ್ಕøತಿಕ ಸ್ಥತಿಗತಿಯ ನೆನಪಿನ ಸ್ಮøತಿಯೊಂದಿಗೆ ಎಳೆಎಳೆಯಾಗಿ ಬಿಡಿಸಿಟ್ಟ ಸಖ್ಯದ ಆಖ್ಯಾನÀ ಕಟು-ಮಧುರ ವ್ಯಾಖ್ಯಾನ ಎಂದರು.
ಒಂದು ಕುಟುಂಬದ ಗೃಹಸ್ಥ ಬೇಂದ್ರೆ, ವೃತ್ತಿಯಲ್ಲಿ ಮಾಸ್ತರ ಬೇಂದ್ರೆ, ಸಾಧನಕೇರಿಯ ನಾಗರಿಕ ಬೇಂದ್ರೆ, ಗೆಳೆಯರ ಬಳಗದ ಅಣ್ಣ ಬೇಂದ್ರೆ, ವಾಗ್ಮಿ ಬೇÉಂದ್ರೆ ಹೀಗೆ ಹಲವು ಮುಖಗಳ ಬೇಂದ್ರೆಯವರನ್ನು ಸಂದರ್ಭೋಚಿತವಾಗಿ ಅವರ ಜೀವನ ಘಟನೆಗಳೊಂದಿಗೆ ಮನಮುಟ್ಟುವಂತೆ ಉಪನ್ಯಾಸ ಮಾಡಿ, 1918 ರ “ತುತ್ತೂರಿ” ಕವಿತೆಯನ್ನು ಬರೆಯುವ ಮೂಲಕ ಕಾವ್ಯಕೃಷಿಗೆ ತೊಡಗಿಕೊಂಡದ್ದರಿಂದ ಬೇಂದ್ರೆಯವರ ಕಾವ್ಯ ಕೃಷಿಗೆ ಈಗ ಶತಮಾನೋತ್ಸವದ ಸಂಭ್ರಮ ಎಂಬ ವಿಚಾರವನ್ನು ತಿಳಿಸಿದರು.
ಉಪನ್ಯಾಸದ ನಂತರ ಸಾಹಿತ್ಯ ಆಸಕ್ತ ಸಹೃದಯರಿಂದ ಸಖೀಗೀತದ ಸಾಹಿತ್ಯ ಸಂವಾದ ಕಾರ್ಯಕ್ರಮ ಯಶಸ್ವಿಯಗಿ ನೆರವೇರಿತು. ಸಂವಾದ ಕಾರ್ಯಕ್ರಮವನ್ನು ಗುರುನಾಥ ಕುಲಕರ್ಣಿ ನಡೆಸಿಕೊಟ್ಟರು. ಸಂವಾದದಲ್ಲಿ ಹಿರಿಯ ನ್ಯಾಯವಾದಿಗಳಾದ ಜೀನದತ್ತ ದೇಸಾಯಿ, ಸಾಹಿತಿ ಎಲ್ ಎಸ್ ಶಾಸ್ತ್ರಿ, ಡಾ ಬಸವರಾಜ ಜಗಜಂಪಿ, ಯ ರು ಪಾಟೀಲ, ಸುಭಾಷ ಏಣಗಿ, ಶ್ರೀಮತಿ ಪದ್ಮ ಕುಲಕರ್ಣಿ, ರಂಜನಾ ನಾಯಿಕ ಹಾಗು ಇತರರು ಭಾಗವಹಿಸಿದ್ದರು. ತಿಂಗಳ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ತಿಂಗಳ ಕವಿಯಾಗಿ ಹಿರಿಯ ಕವಿ ಎಂ. ಎಸ್ ಇಂಚಲ್ ಆಗಮಿಸಿ ತಮ್ಮ ಎರಡು ಕವಿತೆಗಳನ್ನು ವಾಚನ ಮಾಡಿದರು. ಆರಂಭದಲ್ಲಿ ಶ್ರೀಮತಿ ದೀಪಾ ಪದಕಿ ಬೇಂದ್ರೆಯವರ ಸಖೀಗೀತದ ಲಾಸ್ಯವಾಡು ಬಾರೇ.. ಉಷ… ಲಾಸ್ಯವಾಡು ಬಾ.. ಗೀತೆಯನ್ನು ಶುಶ್ರಾವ್ಯವಾಗಿ ಹಾಡಿದರು. ಶೃದ್ಧಾ ಜೋಶಿಪಾಟೀಲ ಅತಿಥಿಗಳನ್ನು ವೇದಿಕೆಗೆ ಪರಿಚಯಿಸಿದರು. ಸಾಂಸ್ಕøತಿಕ ವೇದಿಕೆಯ ಸಂಚಾಲಕರಾದ ಶಿರೀಷ ಜೋಶಿ ಸ್ವಾಗತ ಮತ್ತು ಪ್ರಸ್ತಾವನೆಯನ್ನು ಮಾಡಿದರು. ಡಾ ಎ ಎಲ್ ಕುಲಕರ್ಣಿ ಸಾಂಸ್ಕøತಿಕ ವೇದಿಕೆಯ ಪ್ರತಿನಿಧಿಯಾಗಿ ಮಾತಾಡಿದರು. ಶ್ರೀಮತಿ ಪದ್ಮಾ ಕುಲಕರ್ಣಿ ವಂದಿಸಿದರು. ನೀರಜಾ ಗಣಾಚಾರಿ ಕಾರ್ಯಕ್ರಮ ನಿರೂಪಿಸಿದರು The poetic beauty of the sunglasses is an underground tinge. Dr. Shamasundara Bidarakundi.

| Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

 

Read Belgaum News & Updates for What’s Happening in Around You @ in News Belgaum Kannada News Portal.