news belgaum:ಸರಾಯಿ ಮಾರಾಟ ಮತ್ತು ವೇಶ್ಯಾವಾಟಿಕೆಯ ಮೇಲೆ ದಾಳಿ ; ರೂ.1,48,847/- ಮೌಲ್ಯದ ಸರಾಯಿ & ರೂ.1000/- ನಗದು ವಶ.

Attack on Sarai Sale and Prostitution

0 195

ಬೆಳಗಾವಿ:(news belgaum)ಬೆಳಗಾವಿ ನಗರದ ಟಾಪ್ ಇನ್ ಟೌನ್ ಹೊಟೇಲ್‍ನಲ್ಲಿ ನಡೆಯುತ್ತಿರುವ ಅಕ್ರಮ ಸರಾಯಿ ಮಾರಾಟ ಮತ್ತು ವೇಶ್ಯಾವಾಟಿಕೆಯ ಮೇಲೆ ದಾಳಿ ; ರೂ.1,48,847/- ಮೌಲ್ಯದ ಸರಾಯಿ & ರೂ.1000/- ನಗದು ವಶ. 1) ಮಾನ್ಯ ಪೊಲೀಸ್ ಆಯುಕ್ತರು, ಬೆಳಗಾವಿ ನಗರ ರವರಿಗೆ ನಗರದ ಕಿರ್ಲೋಸ್ಕರ ರಸ್ತೆಯಲ್ಲಿರುವ ಟಾಪ್ ಇನ್ ಟೌನ್ ಹೊಟೇಲ್‍ನಲ್ಲಿ ನಡೆಯುತ್ತಿರುವ ಅಕ್ರಮ ಸರಾಯಿ ಮಾರಾಟ ಮತ್ತು ವೇಶ್ಯಾವಾಟಿಕೆಯ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಬೆಳಗಾವಿ ನಗರದ ಕಿರ್ಲೊಸ್ಕರ ರಸ್ತೆಯಲ್ಲಿರುವ ಟಾಪ್ ಇನ್ ಟೌನ್ ಹೋಟೇಲ್ ವೆಸ್ಟರ್ನ ಟವರದಲ್ಲಿ ಆರೋಪಿ 1) ಲಕ್ಷ್ಮಣ ಗೋವಿಂದಸ್ವಾಮಿ ವೆಮುಲಕರ (ಹೋಟೇಲ್ ಮಾಲೀಕ) 2) ವಿಜಯ ಮುದ್ದಣ್ಣ ಶೆಟ್ಟಿ 3) ರಾಹುಲ ಶಹಾಪೂರಕರ (ಮ್ಯಾನೇಜರಗಳು) 4) ಕಿಶೋರ ಗೋಪಾಲ ವಾಡೇಕರ 5)ಶಿವಾನಂದ ಸುರೇಣ ಮಾನಗಾಂವಿ, 6) ಫ್ರಾನ್ಸಿಸ್ ಫರ್ನಾಂಡಿಸ್ ಪೌಲ್ 7) ದೇವೇಂದ್ರ ತಿಪ್ಪೇಸ್ವಾಮಿ ಸಾಲಿ ಸಾ|| ಗುಡಿಕೋಟೆಹಳ್ಳಿ, ತಾ|| ಸಂಡೂರ, ಬಳ್ಳಾರಿ, 8) ಈರಣ್ಣ ಶಿವಲಿಂಗಪ್ಪ ಕುಂಬಾರ ಸಾ|| ಭಾವಿಹಾಳ, ತಾ|| ಬೈಲಹೊಂಗಲ ಇವರೆಲ್ಲ ಸೇರಿ ಕಾನೂನು ಬಾಹಿರ್‍ವಾಗಿ ಅಬಕಾರಿ ಇಲಾಖೆಯ ಲೈಸೆನ್ಸ ಇಲ್ಲದೇ ನಿಯಮ ಉಳ್ಳಂಘಿಸಿ ಕಟ್ಟಡದ ಟೆರೆಸ್ ಮೇಲೆ ಮಾರಾಟ ಮಾಡುತ್ತಿದ್ದಾಗ ಶ್ರೀ ಜಿ ವಾಯ್ ಗುಡಾಜಿ ಎಸಿಪಿ ಖಡೇಬಜಾರ ಉಪವಿಭಾಗ ಹಾಗೂ ಅವರ ಸಿಬ್ಬಂದಿಯವರು ದಾಳಿ ಮಾಡಿ ಹೋಟೆಲ್ ಮಾಲೀಕ, ಮ್ಯಾನೇಜರ ಮತ್ತು ಕೆಲಸಗಾರರನ್ನು ವಶಕ್ಕೆ ಪಡೆದುಕೊಂಡು ಅವರಿಂದ ಒಟ್ಟು ರೂ.1,48,847/- ಮೌಲ್ಯದ ಅಕ್ರಮ ಸರಾಯಿ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡು ಖಡೇಬಜಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
2) ಅದೇ ಹೊಟೇಲನಲ್ಲಿ ಅದರ ಮಾಲೀಕ 1)ಲಕ್ಷ್ಮಣ ಗೋವಿಂದಸ್ವಾಮಿ ವೆಮುಲಕರ 2)ಮೋಹನ ರಾಘವನ ಮತ್ತು 3)ವಿಜಯ ಶೆಟ್ಟಿ ಮ್ಯಾನೇಜರ ರವರು ತಮ್ಮ ಲಾಡ್ಜದಲ್ಲಿ ವೇಶ್ಯಾವಾಟಿಕೆ ನಡೆಸುವ ಸಲುವಾಗಿ ಅಸಹಾಯಕ ನೊಂದ ಮಹಿಳೆಯನ್ನಿಟ್ಟುಕೊಂಡು ಆರೋಪಿ ರಮೇಶ ಕಲ್ಲಪ್ಪ ಐನಾಪೂರ ಸಾ|| ಪಾಟೀಲ ಗಲ್ಲಿ ಬೆಳಗಾವಿ ಇವನೊಂದಿಗೆ ವೇಶ್ಯಾವಾಟಿಕೆ ನಡೆಸಲು ಅವಕಾಶ ಮಾಡಿಕೊಡುತ್ತಿದ್ದ ಹೋಟೇಲ್ ಮೇಲೆ ಶ್ರೀ ಜಿ ವಾಯ್ ಗುಡಾಜಿ ಎಸಿಪಿ ಖಡೇಬಜಾರ ಉಪವಿಭಾಗ ಹಾಗೂ ಅವರ ಸಿಬ್ಬಂದಿಯವರು ದಾಳಿ ಮಾಡಿ ಹೋಟೆಲ್ ಮತ್ತು ಲಾಡ್ಜ ಮಾಲೀಕರು ಮತ್ತು ವೇಶ್ಯಾವಾಟಿಕೆಯ ಆರೋಪಿತನನ್ನು ವಶಕ್ಕೆ ಪಡೆದುಕೊಂಡಿದ್ದು ಅವನ ಬಳಿ ಇದ್ದ ರೂ.1000/-ಹಣವನ್ನು ಜಪ್ತ ಮಾಡಲಾಗಿರುತ್ತದೆ.
ಈ ಮೇಲಿನಂತೆ ಖಡೇಬಜಾರ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. Attack on Sarai Sale and Prostitution

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

ನಿಮ್ಮ ಅನಿಸಿಕೆ ಅಭಿಪ್ರಾಯ , ಸುದ್ದಿಗಳನ್ನು newsbelagavi@gmail.com ಗೆ ಕಳುಹಿಸಿ.

>>> News Belgaum – No.1 Kannada News Portal in Belagavi

ಜಾಹೀರಾತು , ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ : Mobile : 82175 55800