ನೀರು ಸರಬರಾಜಿನಲ್ಲಿ ವ್ಯತ್ಯಯ…

0 7

ನೀರು ಸರಬರಾಜಿನಲ್ಲಿ ವ್ಯತ್ಯಯ…

ಹಾಸನ ಅ.12: ನಗರದ ಗೊರೂರು ರಸ್ತೆ ಕೊಗ್ಗನಗಟ್ಟ ಬಳಿ ಹಾಸನ ನಗರಕ್ಕೆ ನೀರು ಸರಬರಾಜು ಮಾಡುವ ಗೊರೂರು ನೀರು ಸರಬರಾಜು ವ್ಯವಸ್ಥೆಯ 500 ಮಿ.ಮೀ ವ್ಯಾಸದ ಮುಖ್ಯ ಏರು ಕೊಳವೆ ಮಾರ್ಗ ಅ.11 ರಂದು ಬೆಳಗ್ಗೆ 11 ಗಂಟೆ ಸಮಯದಲ್ಲಿ ಹೊಡೆದುಹೋದ ಕಾರಣ ಅ.12 ಮತ್ತು 13ರಂದು ಎರಡು ದಿನಗಳು ಹಾಸನ ನಗರಕ್ಕೆ ಹೇಮಾವತಿ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿರುತ್ತದೆ. ಎಂದಿನಂತೆ ಕೊಳವೆ ಬಾವಿಗಳ ಮೂಲಕ ಹಾಗೂ ನೀರು ಸರಬರಾಜು ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುವುದು ಸಾರ್ವಜನಿಕರು ಸಹಕರಿಸಬೇಕೆಂದು ನಗರಸಭೆ ಪೌರಾಯುಕ್ತರು ಕೋರಿದ್ದಾರೆ.
***

Source

ನಿಮ್ಮ ಅನಿಸಿಕೆ ಅಭಿಪ್ರಾಯ , ಸುದ್ದಿಗಳನ್ನು newsbelagavi@gmail.com ಗೆ ಕಳುಹಿಸಿ.

>>> News Belgaum – No.1 Kannada News Portal in Belagavi

ಜಾಹೀರಾತು , ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ : Mobile : 82175 55800