ಪ್ರೇಮ ಬರಹ ಚಿತ್ರದ ಟ್ರೈಲರ್ ರಿಲೀಸ್

prema baraha trailer released | News Belgaum

Belgaum News – News Belgaum :  ಪ್ರೇಮ ಬರಹ ಚಿತ್ರದ ಟ್ರೈಲರ್ ರಿಲೀಸ್ :  ಅರ್ಜುನ್ ಸರ್ಜಾ ಮಗಳು ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಅಭಿನಯಿಸಿರುವ ‘ಪ್ರೇಮ ಬರಹ’ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಗಾಂಧಿನಗರದಲ್ಲಿ  ಈ ಚಿತ್ರದ ಬಗ್ಗೆ ಬಾರಿ ನಿರೀಕ್ಷೆ ಇದೆ. ಸಿನಿಮಾ ಟ್ರೈಲರ್ ಗಣರಾಜ್ಯೋತ್ಸವದ ದಿನ ಬಿಡುಗಡೆಯಾಗಿದ್ದು   ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿಸಿದೆ.

ಮುಂದಿನ ತಿಂಗಳು ಫೆಬ್ರವರಿ 9 ರಂದು ‘ಪ್ರೇಮ ಬರಹ’ ರಾಜ್ಯಾದ್ಯಂತ ತೆರೆ ಕಾಣಲು ಸಜ್ಜಾಗಿದೆ. ಈಗಾಗಲೇ ಟಿಸರ್ ಹಾಗೂ ಹಾಡುಗಳ ಮೂಲಕ ಗಮನ ಸೆಳೆದಿರುವ ಸಿನಿಮಾ ಈಗ ಟ್ರೈಲರ್ ರಿಲೀಸ್ ನಲ್ಲಿ ಇನ್ನಷ್ಟು ಕುತೂಹಲ ಮೂಡಿಸಿದೆ. ಪ್ರೇಮ ಬರಹ ಎಂದಾಗಲೇ ಈ ಟೈಟಲ್ ಲವ್ ಸ್ಟೋರಿ ಸಿನಿಮಾ ಎಂದು ತಿಳಿಯುತ್ತದೆ, ಲವ್, ಸೆಂಟಿಮೆಂಟ್, ಆಕ್ಷನ್ ಚಿತ್ರದಲ್ಲಿದೆ.

ಐಶ್ವರ್ಯ ಸರ್ಜಾಗೆ ಚಂದನ್ ನಾಯಕನಾಗಿದ್ದು, ಸುಹಾಸಿನಿ, ಪ್ರಕಾಶ್ ರೈ, ಸಾಧುಕೋಕಿಲಾ, ಅರ್ಜುನ್ ಸರ್ಜಾ, ರಂಗಾಯಣ ರಘು, ಮಂಡ್ಯ ರಮೇಶ್, ಕುರಿ ಪ್ರತಾಪ್ ಸೇರಿದಂತೆ ಹಲವು ನಟರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇನ್ನು ಚಿತ್ರದ ವಿಶೇಷ ಹಾಡಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಕೂಡ ಹೆಜ್ಜೆಹಾಕಿದ್ದಾರೆ. ಇನ್ನುಳಿದಂತೆ ಕಥೆ, ಚಿತ್ರಕಥೆ, ನಿರ್ದೇಶನ ಹಾಗೂ ನಿರ್ಮಾಣ ಅರ್ಜುನ್ ಸರ್ಜಾ ಅವರೇ ನಿರ್ವಹಿಸಿದ್ದಾರೆ. ಜೆಸ್ಸಿಗಿಫ್ಟ್ ಸಂಗೀತ ನೀಡಿದ್ದಾರೆ.


Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

Read Belgaum News & Updates for What’s Happening in Around You @ in News Belgaum Kannada News Portal.