before post

ಪ್ರಿಯತಮನ ವಿರುದ್ಧವೇ ದೂರು ನೀಡಿದ ನಟಿ

ಪ್ರಿಯತಮನ ವಿರುದ್ಧವೇ ದೂರು ನೀಡಿದ ನಟಿ - Actress complains against her Lover

0 191

ಪ್ರಿಯತಮನ ವಿರುದ್ಧವೇ ದೂರು ನೀಡಿದ ನಟಿ

ಪೆರಂಬೂರು:  ನಟಿಯೊಬ್ಬಳನ್ನು ಬಲವಂತವಾಗಿ ಮದುವೆಯಾಗುವಂತೆ  ಪೀಡಿಸುತ್ತಿದ್ದ  ಪ್ರಿಯತಮನ ಮೇಲೆ ಆಕೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ತಮಿಳಿನ ಕಿರುತೆರೆಯಲ್ಲಿ ಈಗ ಈಗ ಬೆಳೆಯುತ್ತಿರುವ ನಟಿ ನೀಲಾಣಿ ದೂರು ದಾಖಲಿಸಿರುವುದು. ಇತ್ತೀಚೆಗೆ ನಡೆದ ಸ್ಟರ್ಲೈಟ್ ಹೋರಾಟದಲ್ಲಿ ಪೊಲೀಸರ ದರ್ಪದ ವಿಡಿಯೋ ತುಣುಕುಗಳನ್ನು ಸಾಮಾಜಿಕ   ಮಾಧ್ಯಮಗಳಲ್ಲಿ ಬಿತ್ತರಿಸಿ ಸುದ್ದಿಯಾಗಿದ್ದ ನಟಿ ನೀಲಾಣಿಯೇ ಈಗ ತನ್ನ ಪ್ರಿಯತಮನ ವಿರುದ್ಧ ಪೊಲೀಸರ ಮೊರೆ ಹೋಗಿರುವಂತಹದ್ದು.

ಸ್ಟರ್ಲೈಟ್ ಹೋರಾಟದ ವೊಡೊಯೋಗಳನ್ನು ಪೋಸ್ಟ್ ಮಾಡಿದ್ದರಿಂದ ಪೊಲೀಸರು ಈಕೆಯನ್ನು  ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.

ನಟಿ ನೀಲಾಣಿ ಈಗ ಟಿವಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.

ಗಾಂಧಿಲಲಿತ್ ಕುಮಾರ್ ಎಂಬ ಯುವಕನ ಜೊತೆ ಪ್ರೇಮಾಯಣ ನಡೆಸುತ್ತಿರುವ  ನೀಲಾಣಿ, ಇತ್ತೀಚೆಗೆ ಪ್ರಿಯಕರ ಜೊತೆ ಮನಸ್ತಾಪವನ್ನು ಹೊಂದಿದ್ದಾಳೆ ಎನ್ನಲಾಗ್ತಿದೆ.  ನೀಲಾಣಿ ನೆನ್ನೆ ಮೈಲಾಪುರದಲ್ಲಿ ನಡಯುತ್ತಿದ್ದ ಧಾರಾವಾಹಿಯ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರೆ, ಅಲ್ಲಿಗೆ ಬಂದಂತಹ ಗಾಂಧಿಲಲಿತ್ ಕುಮಾರ್ ತನ್ನನು ವಿವಾಹವಾಗುವಂತೆ ಪೀಡಿಸಿ, ದಾಂಧಲೆ ನಡೆಸಿದ್ದಾನೆ. ಇದರಿಂದ ಧಾರಾವಾಹಿಯ ಚಿತ್ರೀಕರಣ ಅರ್ಧಕ್ಕೆ ನಿಂತು ಹೋಗಿದೆ.

ಇದರಿಂದ ಬೇಸತ್ತ ನಟಿ ನೀಲಾಣಿ ತನ್ನ ಗೆಳೆಯನ ವಿರುದ್ಧ  ಮೈಲಾಪುರ ಪೊಲೀಸರಿಗೆ ದೂರು ನೀಡಿದ್ದಾಳೆ.
ಅದರಲ್ಲಿ, ಈಕೆ ಗಾಂಧಿಲಲಿತ್ ಕುಮಾರ್ ಜೊತೆಗಿನ ಸ್ನೇಹವನ್ನು ಉಲ್ಲೇಖಿಸಿದ್ದು,  ಈಗ  ಬಂದು ಬಲವಂತವಾಗಿ ಮದುವೆಯಾಗುವಂತೆ ಪೀಡಿಸುತ್ತಿದ್ದಾನೆ, ತನಗೆ ವಿವಾಹವಾಗಲು ಇಷ್ಟವಿಲ್ಲವೆಂದು  ಉಲ್ಲೇಖಿಸಿದ್ದಾಳೆ. ಪದೇ ಪದೇ ಶೂಟಿಂಗ್ ಸ್ಪಾಟ್ ಗೆ  ಬರುವ ಗಾಂಧಿಲಲಿತ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿಮಾಡಿದ್ದಾಳೆ. ಪೊಲೀಸರು ದೂರು ದಾಖಲಿಸಿಕೊಂಡು,  ತನಿಖೆ ಆರಂಭಸಿದ್ದಾರೆ. /////

ನಿಮ್ಮ ಅನಿಸಿಕೆ ಅಭಿಪ್ರಾಯ , ಸುದ್ದಿಗಳನ್ನು newsbelagavi@gmail.com ಗೆ ಕಳುಹಿಸಿ.

>>> News Belgaum – No.1 Kannada News Portal in Belagavi

ಜಾಹೀರಾತು , ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ : Mobile : 82175 55800