ದುನಿಯಾ ವಿಜಿಗೆ ಬೇಲಾ ಜೈಲಾ

0 68

ದುನಿಯಾ ವಿಜಿಗೆ ಬೇಲಾ ಜೈಲಾ

ನಟ ದುನಿಯಾ ವಿಜಯ್ ಅಂಡ್ ಟೀಂ ನಡೆಸಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸೆಷನ್‌ ಕೋರ್ಟ್‌ ಇಂದು ತೀರ್ಪು ನೀಡಲಿದೆ.

 ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಅರ್ಜಿ ಸಲ್ಲಿಸಿದ್ದ ನಟ ದುನಿಯಾ ವಿಜಯ್ ಅಂಡ್‌ ಟೀಂ , ಕೋರ್ಟ್‌ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.

ಜಾಮೀನು ಅರ್ಜಿಯ ಬಗ್ಗೆ ನಗರದ ಸೆಷನ್‌ ಕೋರ್ಟ್‌ ಇಂದು ತೀರ್ಪನ್ನು ನೀಡಲಿದ್ದು, ನಟ ವಿಜಿ ಅಂಡ್‌ ಗ್ಯಾಂಗ್‌ಗೆ ಬೇಲಾ ಅಥವಾ ಜೈಲೇ ಗತಿನಾ ಎಂಬುದು ತಿಳಿಯಲಿದೆ.

ಅಂದಹಾಗೇ ಸ್ನೇಹಿತನ ಮೇಲೆ ಸಹಚರರೊಂದಿಗೆ ಹಲ್ಲೆ ನಡೆಸಿದ ಆರೋಪದ ಮೇಲೆ ನಟ ವಿಜಯ್ ಹಾಗೂ ಸಹಚರರು ಪರಪ್ಪನ ಅಗ್ರಹಾರ ಜೈಲು ಸೇರಿದ್ದರು.

ಈ ಪ್ರಕರಣ ಕುರಿತಂತೆ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ, 8ನೇ ಎಸಿಎಂಎಂ ನ್ಯಾಯಾಲಯ ವಿಜಿ ಅಂಡ್‌ ಟೀಂಗೆ ಜಾಮೀನು ನಿರಾಕರಿಸಿತ್ತು. ಹಾಗು ಕೋರ್ಟ್‌ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ////

 

ನಿಮ್ಮ ಅನಿಸಿಕೆ ಅಭಿಪ್ರಾಯ , ಸುದ್ದಿಗಳನ್ನು newsbelagavi@gmail.com ಗೆ ಕಳುಹಿಸಿ.

>>> News Belgaum – No.1 Kannada News Portal in Belagavi

ಜಾಹೀರಾತು , ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ : Mobile : 82175 55800