before post

13 ರಂದು ಢೋರ ಕಕ್ಕಯ್ಯಾ ಜಾತ್ರಾ ಮಹೋತ್ಸವ

Dhaka Kakayya Jatra Jubilee on 13th

0

ಬೆಳಗಾವಿ 🙁news belgaum) ಖಾನಾಪೂರ ತಾಲೂಕಿನ ಕಕ್ಕೇರಿಯಲ್ಲಿ ಮಹಾಶಿವರಾತ್ರಿ ನಿಮೀತ್ಯವಾಗಿ ಶ್ರೀ ಢೋರ ಕಕ್ಕಯ್ಯಾ ಜಾತ್ರಾ ಮಹೋತ್ಸವ ಮಂಗಳವಾರ ದಿ.13 ರಿಂದ ಬುಧವಾರ 14ರ ವರೆಗೆ ನಡೆಯಲಿದ್ದು. ಮಂಗಳವಾರ ದಿ.13 ಮಧ್ಯಾಹ್ನ 12 ರಿಂದ ಸಂಜೆ 7:30 ರ ವರೆಗೆ ಕ್ಷೇಮ ಸಮಾಚಾರ, ಶಿವನ ಜಾಗರಣೆ, ದೀಪಾಲಂಕಾರ ಮತ್ತು ಪ್ರವಚನ ಕಾರ್ಯಕ್ರಮ ಜರುಗಲಿದೆ. ಸಂಜೆ 8 ಗಂಟೆಗೆÉ “ಜಾನಪದ ಉತ್ಸವ” ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಳಗಾವಿ ಹಾಗೂ ಶ್ರೀ ಡೋಹರ ಕಕ್ಕಯ್ಯಾ ಜ್ಞಾನ ಪೀಠ ಭೀಮಶಕ್ತಿ ವೃದ್ದಾಶ್ರಮ ಟ್ರಸ್ಟ್ ಗೋಕಾಕ ಇವರ ಸಂಯುಕ್ತ ಆಶ್ರಯದಿಂದ ಕಲಾವಿದರಾದ ಅಕ್ಷತಾ ಹಾಗೂ ತಂಡದವರಿಂದ ಭರತನಾಟ್ಯ, ಸಚಿನ ಜೋಗದಂಡೆ, ರೇವತಿ ಪತ್ತಾರ, ಪ್ರವೀಣ ಮಾವರಕರÀ ಸೇರಿದಂತೆ ವಿವಿಧ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದೆ.
ಸಮಾಜದ ಗುರುಮಾತೆ ಮಾತೋಶ್ರೀ ನಂದಾತಾಯಿ ಅವರ ದಿವ್ಯ ಸಾನ್ನಿಧ್ಯವನ್ನು ವಹಿಸುವರು. ಗ್ರಾಪಂ ಅಧ್ಯಕ್ಷೆ ರಾಜೇಶ್ರೀ ಹಟ್ಟಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಅಖೀಲ ಭಾರತೀಯ ಡೋಹರ ಕಕ್ಕಯ್ಯ ಸಮಾಜದ ಉಪಾಧ್ಯಕ್ಷ ಪರಶುರಾಮ ಪೋಳ, ಲೋಕವಾರ್ತೆ ದಿನ ಪತ್ರಿಕೆ ಸಂಪಾದಕ ಹಾಗೂ ನಿಯೋಜಿತ ರಾಜ್ಯ ವ್ಯಾಪ್ತಿ ಡೋಹರ ಕಕ್ಕಯ್ಯಾ ಸೈನ್ಯ ಸಂಘಟಕರದ ಎಮ್.ಬಿ.ಮಾವರಕರ, ಸಂಚಾಲಕರಾದ ಮಾರುತಿ ಮಾವರಕರ, ಬೆಳಗಾವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್ ಕರಿಶೆಂಕರಿ, ನ್ಯಾಯವಾದಿ ಸಿ.ಬಿ.ಅಂಬೋಜಿ, ಸೇರಿದಂತೆ ಕಕ್ಕೇರಿ ಗ್ರಾಮದ ಮುಖಂಡರು, ಅಖಿಲ ಭಾರತೀಯ ಢೋಹರ ಕಕ್ಕಯ್ಯ ಸಮಾಜದ ಸರ್ವ ಸದಸ್ಯರು, ಸಮಾಜದ ಮುಖಂಡರು ಭಾಗವಹಿಸುವರು.
ಬುಧವಾರ ದಿ.14 ರಂದು ಬೆಳಿಗ್ಗೆ 5:30 ಗಂಟೆಯಿಂದ ವಿಧಿ ವಿಧಾನಗಳ ಪ್ರಕಾರ ಢೋರ ಕಕ್ಕಯ್ಯಾ ಕತೃ ಗದ್ದುಗೆಗೆ ಶೃದ್ದಾ ಭಕ್ತಿಯಿಂದ ವಿಶೇಷ ಪೂಜೆ, ಅಭಿಷೇಕ, ಪುಷ್ಟಗಳಿಂದ ಅಲಂಕಾರ, ಪಲ್ಲಕ್ಕಿ ಉತ್ಸವ ಮೇರವಣಿಗೆ ಜರಗುತ್ತವೆ. ನಂತರ ಕಕ್ಕಯ್ಯನವರ ಮಹಾ ಪ್ರಸಾದ ಜರುಗುವುದು. ಈ ಕಾರ್ಯಕ್ರಮದಲ್ಲಿ ಸಮಾಜದ ಸರ್ವ ಭಾಂದವರು ಪಾಲ್ಗೋಳಬೇಕೆಂದು ಸಂಘಟಕರು, ಸಂಚಾಲಕರು ತಿಳಿಸಿದ್ದಾರೆ.https://newsbelgaum.in

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.