ಖಾನಾಪೂರದ ನಗರದಲ್ಲಿ ನಡೆದ ಭವ್ಯ ಕ್ರಿಕೇಟ್ ಸ್ಪರ್ಧೆ

The grand sport competition in Khanaapur city

ಖಾನಾಪುರ:( news belgaum)ಮಹಾತ್ಮಾ ಶಾಹು ಮಹಾರಾಜರ ಆದರ್ಶಗಳನ್ನು ಯುವಕರು ಮೈಗೂಡಿಸಿಕೊಂಡು ವಿದ್ಯೆ-ವ್ಯವಸಾಯ ಮಾಡಿ ಉನ್ನತಿಹೊಂದಬೇಕು ಮತ್ತು ಛತ್ರಪತಿ ಶಿವಾಜಿ ಕಾಲದಲ್ಲಿ ಡೊಂಬರ ಜನಾಂಗ ಹೋರಾಟ ಮಾಡಿ ಬದುಕಿನ ಮಾದರಿ ತೋರಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂಜಯ ಕುಬಲ ಮಾತನಾಡಿದರು.

ಖಾನಾಪೂರ ತಾಲೂಕಿನ ಶಾಹುರಾಜೆ ನಗರದ ವಿಶಾಲ ಮೈದಾನದಲ್ಲಿ ಗುರುವಾರ ಶ್ರೀ ಮಾವುಲಿ ಯುವ ಕ್ರಿಕೇಟ್ ಸ್ಪೋಟ್ರ್ಸ, ಅಂಬೇಡಕರ ಕ್ರೀಡಾಕಲಾ ಸಾಂಸ್ಕೃತಿಕ ಮಂಡಳ ಮತ್ತು ಖಾನಾಪೂರ ತಾಲೂಕು ಭಾರತೀಯ ಜನತಾ ಪಾರ್ಟಿ ಸಹಯೋಗದಲ್ಲಿ ಭವ್ಯ ಕ್ರಿಕೇಟ್ ಸ್ಪರ್ಧೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಅನಂತರ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೋಚೇರಿ ಮಾತನಾಡುತ್ತ ಆರೋಗ್ಯ ಸುಧಾರಣೆಗೆ ಕ್ರೀಡೆಗಳು ಅವಶ್ಯ, ಡೊಂಬರ ಕಾಲೋನಿಯ ಅಭಿವೃದ್ಧಿಗೆ ರಾಜಕೀಯ ನಾಯಕರು ಶ್ರಮಿಸಬೇಕು ಎಂದರು. ಪ.ಪಂ.ಅಧ್ಯಕ್ಷ ಅಜಿಂ ತೇಲಗಿ ಮಾತನಾಡಿ ಸರ್ವ ಸಮುದಾಯದ ಕ್ರೀಡಾಳುಗಳು ಆಡಲು ಅನುವು ಮಾಡಿಕೊಡಬೇಕಿತ್ತು ಎಂದರು.

ಅಖಿಲ ಭಾರತ ಹಿಂದು ಡೊಂಬರ ಸಮಾಜ ಅಭಿವೃದ್ಧಿಗೋಸ್ಕರ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿಯ ಕ್ರೀಡಾಪಟುಗಳಿಗಾಗಿ ಕ್ರಿಕೇಟ್ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಕ್ರಿಕೇಟ್ ಸ್ಪರ್ಧೆಯಲ್ಲಿ 20 ತಂಡಗಳು ಭಾಗವಹಿಸಿದ್ದವು. ಪ್ರಥಮ ರೂ.15555, ದ್ವಿತೀಯ 10555, ತೃತೀಯ 6666 ಬಹುಮಾನ ಎಂದು ಘೋಷಿಸಲಾಗಿತ್ತು.

ಅಧಯಕ್ಷತೆಯನ್ನು ಡಾ.ಅಂಬೇಡಕರ ಕ್ರೀಡಾ ಮತ್ತು ಕಲಾ ಸಾಂಸ್ಕೃತಿಕ ಮಂಡಳಿಯ ಅಧ್ಯಕ್ಷ ದಿಲೀಪ ಸೋನಟಕ್ಕೆ ವಹಿಸಿದ್ದರು. ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ವಲ್ಲಭ ಗುಣಾಜಿ, ಬಿಜೆಪಿ ಮುಖಂಡ ಸುಭಾಷ ಗುಳಶೆಟ್ಟಿ, ಯುವಧುರೀಣ ಬಾಬಣ್ಣ ಪಾಟೀಲ, ಮಾಜಿ ಜಿ.ಪಂ.ಸದಸ್ಯ ಬಾಬುರಾವ ದೇಸಾಯಿ, ಶ್ರೀ ರಾಮಸೇನಾ ಅಧ್ಯಕ್ಷ ಪಂಡಿತ ಓಗಳೆ, ಪ್ರಧಾನ ಕಾರ್ಯದರ್ಶಿ ಸಂಜಯ ಕಂಚಿ, ಸಂಚಾಲಕ ಸುರೇಶ ಕೋಲಕಾರ ಮತ್ತು ಇತರ ಮುಖಂಡರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಡೊಂಬರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಲೇಖಕ,ಕಾದಂಬರಿಕಾರ ಪ್ರಹ್ಲಾದ ಮಾದರ ನಿರೂಪಿಸಿದರು.(belgaum news)

The grand sport competition in Khanaapur city

Read Belgaum News & Updates for What’s Happening in Around You @ in News Belgaum Kannada News Portal.