ವಾಟ್ಸ್ ಅಪ್-ನೀವು ತಿಳಿಯಬೇಕಾದ ವಿಷಯಗಳು

WhatsApp-you need to know this things | News Belgaum

Belgaum News – News Belgaum : ವಾಟ್ಸ್ ಅಪ್-ನೀವು ತಿಳಿಯಬೇಕಾದ ವಿಷಯಗಳು : WhatsApp ವಾಸ್ತವವಾಗಿ ನಮ್ಮ ಯೋಚನೆಗಿಂತ ಬಹಳಷ್ಟು ಮುಂದೆ ಬಂದಿದೆ.

WhatsApp ಈಗ 1.2 ಶತಕೋಟಿಗೂ ಹೆಚ್ಚು ಸಕ್ರಿಯ ಮಾಸಿಕ ಬಳಕೆದಾರರನ್ನು ಹೊಂದಿದೆ, ಇದನ್ನು ಬಳಸಿ ಜಗತ್ತಿನ ನಾನಾ ಮೂಲೆಯ ಜನರು ಸುಮಾರು 50 ಶತಕೋಟಿ ಸಂದೇಶಗಳನ್ನು , 3.3 ಶತಕೋಟಿ ಚಿತ್ರಗಳನ್ನು ಮತ್ತು 80 ಮಿಲಿಯನ್ GIF ಗಳನ್ನು ದಿನನಿತ್ಯ ರವಾನಿಸುತ್ತಾರೆ. ಇಂದಿಗೆ WhatsApp ಗೊತ್ತಿಲ್ಲದವರಿಲ್ಲ ಎಂದರೆ ತಪ್ಪಾಗುವುದಿಲ್ಲ. ಸಂಪರ್ಕವನ್ನು  ಸುಲಭ ಮಾಡಿದ whatsApp ಉಚಿತ ಅನ್ನುವುದು ಇದರ ವಿಶೇಷ.

ಸಾಮಾನ್ಯವಾಗಿ ನಾವೆಲ್ಲಾ ತಿಳಿದಿರುವುದು ಒಂದು ಮೊಬೈಲ್ ನಲ್ಲಿ ಒಂದು WhatsApp ಬಳಸಬಹುದೆಂದು , ಆದರೇ ನಾವು ಒಂದಕ್ಕಿಂತ ಅಧಿಕ ಬಳಸಬಹುದು. ಇದನ್ನು CLONE ಎಂದು ಕರೆಯಲಾಗುತ್ತದೆ. ವಯಕ್ತಿಕ ಮತ್ತು ವ್ಯವಹಾರಕ್ಕೆಂದು ಬೇರೆ ಬೇರೆ ಬಳಸಬಹುದು.

ಎರಡು ಅಂತದ ಪರಶೀಲನೆ ಅಥವಾ two step verification ಅನ್ನುವುದು ಉತ್ತಮ ಅನುಕೂಲಕರ ಫೀಚರ್ ,

ಇದೇನಂದರೆ  ನಾವು ನಮ್ಮ ಅಕೌಂಟ್ ಗೆ ಲಾಗಿನ್ ಆಗುವ ಮೊದಲು ನಮ್ಮ ಮೊಬೈಲ್ ನಂಬರ್ ಗೆ 6 ಅಂಕಿಗಳ ಸೀಕ್ರೆಟ್ ಸಂಖ್ಯೆಯನ್ನು ಕಳಿಸುತ್ತದೆ. ಲಾಗಿನ್ ಆಗುತ್ತಿರುವವರು ನಾವೇ ಎಂದು ದೃಡೀಕರಿಸಿ ಆ ನಂತರ ಒಳ ಪ್ರವೇಶಿಸಲು ಅನುಮತಿಸುತ್ತದೆ. ನಮ್ಮ ಫೋನ್ ಕಳೆದಾಗ , ಇಲ್ಲವೇ ನಮ್ಮ ನಂಬರ್ ನಕಲಿಸಿ ಯಾರಾದರು ಲಾಗಿನ್ ಆಗುವುದನ್ನು ತಪ್ಪಿಸುತ್ತದೆ.

ಕೆಲವು ಕಾರಣಗಳಿಂದ ಕೆಲವೊಮ್ಮೆ ನಾವು ಪ್ರಾರಂಭಿಸಿರುವ ವಾಟ್ಸ್ ಅಪ್ ಅಕೌಂಟ್ ಉಪಯೋಗಿಸುತ್ತಿರುವುದಿಲ್ಲ , ಇಲ್ಲವೇ ಆ ಫೋನ್ ನಂಬರ್ ನಮ್ಮ ಬಳಿ ಇರುವುದಿಲ್ಲ , ಕೆಲವೊಮ್ಮೆ ಅತಿಯಾದ ಕಿರಿ ಕಿರಿಗಾಗಿ ಆ ಸಂಖ್ಯೆ ಉಪಯೋಗಿಸುವುದು ಇಷ್ಟವಿಲ್ಲದ ಕಾರಣ ಬೇರೊಂದು ನಂಬರ್ ಉಪಯೋಗಿಸುತ್ತಿರುತ್ತೇವೆ , ಆಗಾದರೆ ಮುಂದಿನ ಹಂತ ಉಪಯೋಗಿಸದೆ ಇರುವ ಆ ನಂಬರ್ ಗೆ ಸಂಭಂದಿಸಿದ ಅಕೌಂಟ್ ಅಳಿಸುವುದು . ಅದು ಹೇಗೆ ?

  • ಮೊದಲಿಗೆ ನಿಮ್ಮ whatsapp ಗೆ ತೆರಳಿ , ನಂತರ ನಿಮಗೆ ಕಾಣಸಿಗುವ Settings ಗೆ ತೆರಳಿ.
  • Settings ಗೆ ಹೋದ ಮೇಲೆ ಅಕೌಂಟ್ ( Account option) ಆಪ್ಷನ್ ಗೆ ಹೋಗಿ .
  • ನಿಮಗಲ್ಲಿ Delete My Account ( ನನ್ನ ಅಕೌಂಟ್ ಅಳಿಸಿಹಾಕಿ ) ಆಪ್ಷನ್  ಕಾಣ ಸಿಗುತ್ತದೆ , ಅದನ್ನು ಕ್ಲಿಕ್  ಮಾಡಿ .
  • ಈಗ ಅದು ನಿಮ್ಮ ಫೋನ್ ನಂಬರ್ ಕೇಳುತ್ತದೆ , ನಂಬರ್ ಅನ್ನು ನಮೂದಿಸಿ .
  • ನಿಮ್ಮ ನುಬೇರ್ ನಮೂದಿಸಿದ ಮೇಲೆ ಮತ್ತೊಮ್ಮೆ “Delete My Account” option  ಕ್ಲಿಕ್  ಮಾಡಿ .

ಈಗ ನಿಮ್ಮ ಅಥವಾ ನಿಮಗೆ ಬೇಡವಾದ ಅಕೌಂಟ್ ಡಿಲೀಟ್ ಆಗಿದೆ , ನೀವು ಮುಂದೆ ಎಂದಾದರು ಮತ್ತೆ ಇದೇ ಸಂಖ್ಯೆಯಲ್ಲಿ ಖಾತೆ ತೆರೆಯಲು ಇಚ್ಚಿಸಿದರೆ , ಮತ್ತೆ ತೆರೆಯಬಹದು .

ಆದರೆ ಅದು ಹೊಸ ಖಾತೆ ಆಗುತ್ತದೆ . ಹಳೆಯ ಯಾವುದೇ ಫೋಟೋ , ವೀಡಿಯೊ , ಮತ್ತು ಸಂದೇಶಗಳು ಕಾಣಸಿಗುವುದಿಲ್ಲ.

Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

Read Belgaum News & Updates for What’s Happening in Around You @ in News Belgaum Kannada News Portal.