Ultimate magazine theme for WordPress.

ಹೆಗಡೆ ದಾರಿಯಲ್ಲಿ ಕುಮಾರಣ್ಣ? ಮೇ 28 ಮತ್ತು ಜೂನ್ 18 ರ ದಿಲ್ಲಿ ಭೇಟಿ: ಬದಲಾದ “ಬಾಡಿ ಲಾಂಗ್ವೇಜ್”!

Kumaranna on the way of Hegade? Visit Delhi on May 28 and June 18 : Changed "Body Language"!

0 93

ವಿಶೇಷ ಬರಹ: ಅಶೋಕ್ ಚಂದರಗಿ (news belgaum)

ಸಿಎಮ್ ಗದ್ದುಗೆಗೆ ಕುಳಿತ ಒಂದೇ ತಿಂಗಳಲ್ಲಿ ಕುಮಾರಸ್ವಾಮಿಯವರು ದಿಲ್ಲಿಯಲ್ಲಿ ಪಕ್ಷ ಭೇದವೆನ್ನದೇ ಎಲ್ಲ ನಾಯಕರಿಗೂ ಪ್ರಿಯರೆನಿಸಿಬಿಡುತ್ತಿದ್ದಾರೆ.

ಹೆಗಡೆ ದಾರಿಯಲ್ಲಿ ಕುಮಾರಣ್ಣ? ಮೇ 28 ಮತ್ತು ಜೂನ್ 18 ರ ದಿಲ್ಲಿ ಭೇಟಿ: ಬದಲಾದ “ಬಾಡಿ ಲಾಂಗ್ವೇಜ್”!- Tarun kranti
ಕಳೆದ ಮೇ 28 ರಂದು ದಿಲ್ಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮೈಸೂರು ಪೇಟಾ ತೊಡಿಸಿ ಸನ್ಮಾನಿಸಿ ಬಂದಿದ್ದ ಕುಮಾರಣ್ಣ ಕೇಂದ್ರದೊಂದಿಗೆ ಹೊಂದಿಕೊಂಡು ಹೋಗುವ ಸಂದೇಶ ಕಳಿಸುವಲ್ಲಿ ಯಶಸ್ವಿಯಾಗಿದ್ದರು. ಮೋದಿಯವರ ಎದುರು ಕುಮಾರಣ್ಣ ಕೈಕಟ್ಟಿ ಕುಳಿತ ಭಂಗಿ ಅವರ ನಯವಿನಯ, ಸೌಜನ್ಯ ತೋರಿಸುತ್ತಿತ್ತು.

ಹೆಗಡೆ ದಾರಿಯಲ್ಲಿ ಕುಮಾರಣ್ಣ? ಮೇ 28 ಮತ್ತು ಜೂನ್ 18 ರ ದಿಲ್ಲಿ ಭೇಟಿ: ಬದಲಾದ “ಬಾಡಿ ಲಾಂಗ್ವೇಜ್”!- Tarun kranti 2

ಹೆಗಡೆ ದಾರಿಯಲ್ಲಿ ಕುಮಾರಣ್ಣ? ಮೇ 28 ಮತ್ತು ಜೂನ್ 18 ರ ದಿಲ್ಲಿ ಭೇಟಿ: ಬದಲಾದ “ಬಾಡಿ ಲಾಂಗ್ವೇಜ್”!- Tarun kranti 1

ಕಳೆದ ಶನಿವಾರ, ರವಿವಾರ ಮತ್ತು ಸೋಮವಾರ ದಿಲ್ಲಿಯಲ್ಲಿದ್ದ ಅವರು ವಿವಿಧ ರಾಜ್ಯಗಳ ಸಿಎಮ್ ಗಳು, ಕೇಂದ್ರದ ಸಚಿವರು ಮತ್ತು ರಾಹುಲ್ ಗಾಂಧಿ ಅವರನ್ನು ಭೆಟ್ಟಿಯಾಗಿ ತಮ್ಮದೇ ಆದ ಛಾಪನ್ನು ಅವರ ಮೇಲೆ ಮೂಡಿಸಿದ್ದಾರೆ.

ಹೆಗಡೆ ದಾರಿಯಲ್ಲಿ ಕುಮಾರಣ್ಣ? ಮೇ 28 ಮತ್ತು ಜೂನ್ 18 ರ ದಿಲ್ಲಿ ಭೇಟಿ: ಬದಲಾದ “ಬಾಡಿ ಲಾಂಗ್ವೇಜ್”!- Tarun kranti 3

ಹೆಗಡೆ ದಾರಿಯಲ್ಲಿ ಕುಮಾರಣ್ಣ? ಮೇ 28 ಮತ್ತು ಜೂನ್ 18 ರ ದಿಲ್ಲಿ ಭೇಟಿ: ಬದಲಾದ “ಬಾಡಿ ಲಾಂಗ್ವೇಜ್”!- Tarun kranti 4

ಜೂನ್ 18 ರಂದು ಮೋದಿಯವರನ್ನು ಭೆಟ್ಟಿಯಾದಾಗಿನ ಬಾಡಿ ಲಾಂಗ್ವೇಜ್ ನ್ನು ಗಮನಿಸಿದರೆ ಕುಮಾರಸ್ವಾಮಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಈ ಸಲ ಅವರು ಕೈಕಟ್ಟಿ, ಬಾಗಿಕೊಂಡು ಕುಳಿತಿಲ್ಲ. ಎದೆ ಸೆಟೆಸಿ ಕೈಯಲ್ಲಿ ಮನವಿ ಪತ್ರ ಹಿಡಿದುಕೊಂಡು ಕುಳಿತಿದ್ದಾರೆ! ಸಾಮಾಜಿಕ ಮಾನಸ ಶಾಸ್ತ್ರಙ್ಞೆ ಆಮಿ ಕುಡ್ಡಿಯ ಪ್ರಕಾರ, ಯಾವ ವ್ಯಕ್ತಿಯು ಈ ರೀತಿಯಲ್ಲಿ ಕೂಡುತ್ತಾನೊ ಅವನಲ್ಲಿ ಆತ್ಮವಿಶ್ವಾಸ, ಆತ್ಮರಕ್ಷಣೆಯ ಬಲವು ಹೆಚ್ಚಿಗಿರುತ್ತದೆ.

ಹೆಗಡೆ ದಾರಿಯಲ್ಲಿ ಕುಮಾರಣ್ಣ? ಮೇ 28 ಮತ್ತು ಜೂನ್ 18 ರ ದಿಲ್ಲಿ ಭೇಟಿ: ಬದಲಾದ “ಬಾಡಿ ಲಾಂಗ್ವೇಜ್”!- Tarun kranti 5
ಒಂದೇ ತಿಂಗಳಲ್ಲಿ ದಿಲ್ಲಿಯ ನಾಯಕರ ಮನಗೆದ್ದಿರುವ ಕುಮಾರಸ್ವಾಮಿ ಅವರ ಬಗ್ಗೆ ತೃತೀಯ ರಂಗದ ನಾಯಕರೂ ಸಹ ಒಲವು ಹೊಂದಿರುವದು ಬಿಜೆಪಿ ನಾಯಕರಲ್ಲಿ ಆತಂಕ ಮೂಡಿಸಿದೆಯೆನ್ನಲಾಗಿದೆ.

ದಿ.ರಾಮಕೃಷ್ಣ ಹೆಗಡೆಯವರು ಎರಡನೇ ಅವಧಿಗೆ, 1985 ರಲ್ಲಿ, ಸಿಎಮ್ ಆದ ನಂತರ ರಾಷ್ಟ ಮಟ್ಟದ ರಾಜಕೀಯದಲ್ಲಿ ಹೆಚ್ಚು ಜನಪ್ರಿಯರಾಗತೊಡಗಿದರು. ಅವರು ದಿಲ್ಲಿಗೆ ಹೋದರೆಂದರೆ ಬೆಲ್ಲಕ್ಕೆ ಇರುವೆ ಮುಕ್ಕುವಂತೆ ರಾಜಕೀಯ ಮುಖಂಡರು ಮುತ್ತತೊಡಗಿದರು. ಕಾಂಗ್ರೆಸ್ ವಿರೋಧಿ ಶಕ್ತಿಗಳನ್ನೆಲ್ಲ ಒಗ್ಗೂಡಿಸುವಲ್ಲಿ ಅವರ ಶ್ರಮವೂ ಇತ್ತು. ಅವರನ್ನು ಬಳಸಿಕೊಂಡ ದಿಲ್ಲಿಯ ನಾಯಕರು ತದನಂತರ ಅವರನ್ನು ಮೂಲೆಗುಂಪು ಮಾಡುವಲ್ಲಿ ಯಶಸ್ವಿಯಾದರು.

ಹೆಗಡೆ ದಾರಿಯಲ್ಲಿ ಕುಮಾರಣ್ಣ? ಮೇ 28 ಮತ್ತು ಜೂನ್ 18 ರ ದಿಲ್ಲಿ ಭೇಟಿ: ಬದಲಾದ “ಬಾಡಿ ಲಾಂಗ್ವೇಜ್”!- Tarun kranti 6
ಕುಮಾರಸ್ವಾಮಿಯವರು ಒಂದೇ ತಿಂಗಳಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರನ್ನು ಅವರವರ ಸ್ಥಾನಗಳಲ್ಲೇ ಇಡುವಲ್ಲಿ, ರಾಹುಲ್ ಗಾಂಧಿಯವರ ಕೃಪೆಯಿಂದ, ಯಶಸ್ವಿಯಾಗಿದ್ದಾರೆ. ಅದೇ ಕಾಲಕ್ಕೆ ಮೋದಿ, ಅಮಿತ್ ಶಹಾ ಅವರಲ್ಲಿಯೂ ಆಶೆ ಹುಟ್ಟಿಸಿದ್ದಾರೆ! ಮೋದಿಯವರು ದೇವೇಗೌಡರಿಗೆ ಇರುವ “ನೀರಾವರಿ ಪರಿಣಿತಿ” ಯ ಬಗ್ಗೆ ಹೊಗಳಿದ್ದನ್ನು ಕುಮಾರಣ್ಣ ಪತ್ರಕರ್ತರೊಂದಿಗೆ ಹಂಚಿಕೊಂಡಿದ್ದು ಕಾಂಗ್ರೆಸ್ ನಾಯಕರಿಗೆ ಸರಿಯಾದ ಸಂದೇಶ ಕಳಿಸಿದ್ದರೆ ಅಚ್ಚರಿಯೇನಲ್ಲ.ಪಾಲಿಟಿಕಲ್ ಬ್ಯಾಲನ್ಸ ಮಾಡುವದು ಸದ್ಯದ ಸ್ಥಿತಿಯಲ್ಲಿ ಕುಮಾರಣ್ಣರಿಗೆ ಅನಿವಾರ್ಯವಾಗಿದೆ. ಮಾಡುತ್ತಿದ್ದಾರೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (https://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (https://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

Your email address will not be published.