ಮೌಢ್ಯತೆ ನಿರ್ಮೂಲನೆಯಲ್ಲಿ ನಾಟಕ ಸಹಕಾರಿ: ಗುರುಸಿದ್ಧ ಶ್ರೀಗಳು

Drama cooperative in the abolition of sincerity: Gurudev Sri

0 67

ಬೆಳಗಾವಿ: ಸಮಾಜದಲ್ಲಿರುವ ಮೂಢನಂಬಿಕೆ, ಅಂಧ ವಿಶ್ವಾಸಗಳನ್ನು ನಿರ್ಮೂಲನೆ ಮಾಡುವಲ್ಲಿ ನಾಟಕಗಳು ಅತ್ಯಂತ ಸಹಕಾರಿಯಾಗಿ ಕಾರ್ಯ ಮಾಡುತ್ತವೆ ಎಂದು ಕಾರಂಜಿಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ನುಡಿದರು.
ಪ್ರತಿಭಾ ನಾಟ್ಯ ಸಂಘ ಬೆಳಗಾವಿ, ಇವರ ವತಿಯಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಳಗಾವಿ ಇವರ ಸಹಯೋಗದಲ್ಲಿ ಶನಿವಾರ ಚಿಂದೋಡಿ ಲೀಲಾ ರಂಗಮಂದಿರದಲ್ಲಿ ನಡೆದ ತ್ಯಾಗದ ತೊಟ್ಟಿಲು ನಾಟಕಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ಪ್ರತಿಭೆಗಳನ್ನು ಅಭಿವ್ಯಕ್ತಗೊಳಿಸಲು ನಾಟಕದಂತಹ ವೇದಿಕೆಗಳು ಅಗತ್ಯವಾಗಿ ಬೇಕು. ಈ ನಿಟ್ಟಿನಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿರುವ ಪ್ರತಿಭಾ ನಾಟ್ಯ ಸಂಘದವರ ಕಾರ್ಯಪ್ರಶಂಸನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರತಿಭಾ ನಾಟ್ಯ ಸಂಘದ ಗೌರವಾಧ್ಯಕ್ಷ ಶಂಕರ ಅರಕೇರಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪ್ರಾಚಾರ್ಯ ಡಾ. ಎಚ್.ಆಯ್. ತಿಮ್ಮಾಪೂರ, ಸಾರಿಗೆ ಸಂಸ್ಥೆಯ ಎನ್.ಬಿ.ಜಹಾಜ, ಸಿ.ಎಸ್. ಬಿಡನಾಳ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಗುರುನಾಥ ಕಡಬೂರ ಇವರು ಆಗಮಿಸಿದ್ದರು.

ಇದೇ ಸಂದರ್ಭದಲ್ಲಿ ಪತ್ರಕರ್ತ ಗೋಪಾಲ ಖಟಾವಕರ,

ಶ್ರೀನಿವಾಸ ಮುತಾಲಿಕ ದೇಸಾಯಿ ಇವರು ನಾಟಕ ಸಂಘಟಿಸಿ ಪ್ರದರ್ಶಿಸಿದ ಪ್ರತಿಭಾ ನಾಟ್ಯ ಸಂಘದ ಅಧ್ಯಕ್ಷ ಎಸ್.ಎನ್. ಮುತಾಲಿಕ ದೇಸಾಯಿ ಇವರನ್ನು ಶಾಲು ಹೊದಿಸಿ ಸತ್ಕರಿಸಿದರು.
ಹಿರಿಯ ಪತ್ರಕರ್ತ ಕಲ್ಯಾಣರಾವ ಮುಚಳಂಬಿ, ಸಂಗೀತ ಕಲಾವಿದ ಶಂಕರ ಬೇವಿನಗಿಡದ, ಶಿಕ್ಷಣ ಇಲಾಖೆಯ ಜಗಜಂಪಿ, ಉಮೇಶ ಬಡಿಗೇರ, ಬಿ.ಎಚ್.ಕುಲಕರ್ಣಿ, ಬಸವರಾಜ ಮಠದ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಪತ್ರಕರ್ತ ಮುರುಗೇಶ ಶಿವಪೂಜಿ ನಿರೂಪಿಸಿದರು. ಎಸ್.ಎನ್.ಮುತಾಲಿಕ ದೇಸಾಯಿ ಸ್ವಾಗತಿಸಿದರು.Drama cooperative in the abolition of sincerity: Gurudev Sri

ನಿಮ್ಮ ಅನಿಸಿಕೆ ಅಭಿಪ್ರಾಯ , ಸುದ್ದಿಗಳನ್ನು newsbelagavi@gmail.com ಗೆ ಕಳುಹಿಸಿ.

>>> News Belgaum – No.1 Kannada News Portal in Belagavi

ಜಾಹೀರಾತು , ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ : Mobile : 82175 55800